
ಚಾಮರಾಜನಗರ: ಹನೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು.
ಇನ್ಸ್ಪೆಕ್ಟರ್ ಆನಂದ್ ಮೂರ್ತಿ ಮಾತನಾಡಿ ಗಣೇಶ್ ಹಬ್ಬವು ಮೋಜು ಮಸ್ತಿಗೆ ಸೀಮಿತವಾಗಬಾರದು ಇಂದಿನ ಯುವ ಪೀಳಿಗೆಯು ಇದನ್ನು ಬದಲಾಯಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸರ ಸಲಹೆ ಹೇಗಿದೆ:
- ಗಣೇಶ ಕೂರಿಸುವ ಸ್ಥಳ ರಸ್ತೆ ಸಂಚಾರಕ್ಕೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು,
- ಸ್ವಯಂ ಸೇವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕು,
- ರಾತ್ರಿ 9 ಗಂಟೆ ಒಳಗೆ ಗಣೇಶ ಮೂರ್ತಿಯನ್ನು ಬಿಡಬೇಕು,
- ಡಿಜೆ ಕಡ್ಡಾಯ ನಿಷೇಧ,
- ಸಂಪ್ರದಾಯಿಕವಾಗಿ ಡೋಲು, ತಮಟೆಯಂತಹ ವ್ಯವಸ್ಥೆ ಉತ್ತಮ.
- ನಮ್ಮ ಸಂಸ್ಕೃತಿಕ ಪರಂಪರೆ ಉಳಿಸಬೇಕು
ಗ್ರಾಮ ಮಟ್ಟದಲ್ಲಿ ಕುರಿಸುವವರು ಗ್ರಾಮ ಪಂಚಾಯತಿಯ ಪಿಡಿಒ ಗಳಿಗೆ ಮಾಹಿತಿ ತಿಳಿಸಿರಬೇಕು, ಸಾರ್ವಜನಿಕರಿಂದ ಬಲವಂತದಿಂದ ಹಣ ವಂತಿಕೆ ಮಾಡಬಾರದು. ಮಣ್ಣಿನ ಗಣೇಶಮೂರ್ತಿಯನ್ನು ಕೂರಿಸಬೇಕು ಎಂದು ಇನ್ಸ್ಪೆಕ್ಟರ್ ಆನಂದ್ ಮೂರ್ತಿ ತಿಳಿಸಿದರು.
ಚೆಸ್ಕಾಂ ಅಧಿಕಾರಿ ಆನಂದ್ ಮಾತನಾಡಿ ಗಣೇಶ್ ಮೂರ್ತಿ ಕುರಿಸುವಾಗ ವಿದ್ಯುತ್ ಕಂಬಕ್ಕೆ ನೇರವಾಗಿ ವಿದ್ಯುತ್ ಸಂಪರ್ಕ ಮಾಡುವಂತಿಲ್ಲ, ಚೆನ್ನಾಗಿರುವ ವೈರ್ ಗನ್ನು ಹಾಕಬೇಕು .ಯಾವುದೇ ಹಾಳಾಗಿರುವ ವೈರ್ ಗಳನ್ನು ಬಳಸಬಾರದು ಎಂದರು.
ಪಟ್ಟಣ ಪಂಚಾಯತಿ ಅಧಿಕಾರಿ ಪ್ರಕಾಶ್ ಮಾತನಾಡಿ, ಉತ್ಸವ ಸಂದರ್ಭದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು, ಅನುಮತಿ ಇಲ್ಲದೆ ಗಣೇಶವನ್ನು ಕೂರಿಸುವಂತಿಲ್ಲ ಎಂದರು.
ಗಣೇಶ ಮೂರ್ತಿ ಬಿಡಲುಪಟ್ಟಣ ಪಂಚಾಯತಿ ವತಿಯಿಂದ ಹೊಂಡವನ್ನು ಮಾಡಲಾಗುತ್ತದೆ, ನೀವುಗಳು ಗಣೇಶ ಮೂರ್ತಿಯನ್ನು ಹೊಂಡ ದಲ್ಲಿ ಬಿಡಬೇಕು ಹಾಗೂ ಅನುಮತಿ ಪಡೆದ ಗಣೇಶ ಮೂರ್ತಿಯನ್ನು ಕೂರಿಸುವ ಸ್ಥಳವನ್ನು ತಿಳಿಸಿದರೆ ಪಟ್ಟಣ ಪಂಚಾಯತಿ ವತಿಯಿಂದ ಸ್ವಚ್ಚತೆ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮ ಲೆಕ್ಕಿಗಾಧಿಕಾರಿ ಶೇಷಣ್ಣ ಮಾತನಾಡಿ ಕಂದಾಯ ಇಲಾಖೆಯಿಂದ ಏಕಗವಾಕ್ಷಿ ಕೇಂದ್ರವನ್ನು ತೆರೆಯಲಾಗುತ್ತದೆ. ಅದರಿಂದ ಈ ಕೇಂದ್ರದಲ್ಲಿ ಗಣೇಶ ಮೂರ್ತಿ ಕೂರಿಸುವವರು ಎಲ್ಲರೂ ಸಹ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡ ಜಸ್ಸಿಮ್ ಪಾಶ ಮಾತನಾಡಿ ಈ ಮಿಲಾದ್ 5ರಂದು ಆಚರಣೆ ಮಾಡಲಾಗುತ್ತದೆ. ಬೆಳಿಗ್ಗೆ 5 ಗಂಟೆಗೆ ಪ್ರಾರ್ಥನೆ ಮಾಡಲಾಗುತ್ತದೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ , ಅಗ್ನಿ ಶಾಮಕ ಸಿಬ್ಬಂದಿ ಮಹೇಶ್, ಗ್ರಾಮದ ಮುಖಂಡರುಗಳು ,ಸುತ್ತ ಮುತ್ತಲಿನ ಗ್ರಾಮದ ಸಾರ್ವಜನಿಕರು ಹಾಜರಿದ್ದರು .







